ಖಿಲೌನ-
ಮಕ್ಕಳ ಉರ್ದು ಮಾಸಪತ್ರಿಕೆ. (1947)ರಲ್ಲಿ ಪ್ರಾರಂಭವಾಯಿತು. ಶಾಮಾ ಪತ್ರಿಕಾ ಗುಂಪಿನ ಒಡೆತನದಲ್ಲಿ ನವದೆಹಲಿಯಿಂದ ಪ್ರಕಟವಾಗುತ್ತಿದೆ. ಯೂನುಸ್ ದೆಹೆಲ್ವಿ ಇದರ ಸಂಪಾದಕ. ಇದರ ವಾರ್ಷಿಕ ಮತ್ತು ವಿಶೇಷ ಸಂಚಿಕೆಗಳು ಬಹು ಆಕರ್ಷಕವಾಗಿರುತ್ತವೆ. ಸಣ್ಣ ಕಥೆಗಳು, ವ್ಯಂಗ್ಯಚಿತ್ರಗಳು, ಧಾರಾವಾಹಿ ಕಾದಂಬರಿಗಳು, ವಿಜ್ಞಾನ ಕಥೆ, ವಿಶ್ವಕೋಶಸದೃಶ ಲೇಖನಗಳು, ಪ್ರಶ್ನೆ-ಉತ್ತರ ವಿಭಾಗ, ಛಾಯಾಚಿತ್ರಗಳು, ಸ್ಪರ್ಧೆಗಳು ಮುಂತಾದವುಗಳಿಂದ ಕೂಡಿ, ಉರ್ದು ಬರುವ ಮಕ್ಕಳಿಗೆ ಇದು ಪ್ರಿಯವಾಗಿದೆ. ಉರ್ದುವಿನ ಅನೇಕ ಹೆಸರಾಂತ ಲೇಖಕರ ಲೇಖನಗಳಿಂದಲೂ ಕಲಾವಿದರ ಚಿತ್ರಗಳಿಂದಲೂ ಕೂಡಿರುತ್ತದೆ.		(ಎಸ್.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ